12 September Current Affairs

Current Affairs with Multiple Choice Quiz Questions (MCQs) on Daily Current events for preparation of PC, SDA, FDA, Group C, PDO, and State PSC Examinations. 

ಪ್ರಚಲಿತ ಘಟನೆಗಳು | Important Facts

ಕ್ರಿಪ್ಟೊ ನಿಯಂತ್ರಣಕ್ಕೆ ಅಡಿಪಾಯ :
• ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಮತ್ತು ಹಣಕಾಸು ಸ್ಥಿರತೆ ಮಂಡಳಿಯ (ಎಫ್‌ಎಸ್‌ಬಿ) ಶಿಫಾರಸುಗಳನ್ನು ಅನುಮೋದಿಸುವ ಮೂಲಕ ಜಿ20 ಸದಸ್ಯ ರಾಷ್ಟ್ರಗಳು ಕ್ರಿಪ್ಟೊ ಕರೆನ್ಸಿಯ ನಿಯಂತ್ರಣಕ್ಕೆ ಅಡಿಪಾಯ ಹಾಕಿವೆ. ಜಿ20ಯಲ್ಲಿ ಆಗಬಹುದಾದ ಅತ್ಯುನ್ನತ ಮಟ್ಟದ ಚಟುವಟಿಕೆ ಇದಾಗಿದೆ.
‘ನಿಯಂತ್ರಿತ ಮಧ್ಯಸ್ಥಿಕೆ ತಪ್ಪಿಸಲು ಜಾಗತಿಕವಾಗಿ ಸ್ಥಿರ ರೀತಿಯಲ್ಲಿ ಈ ಶಿಫಾರಸುಗಳ ಪರಿಣಾಮಕಾರಿ ಮತ್ತು ಸಮಯೋಚಿತ ಅನುಷ್ಠಾನವನ್ನು ಉತ್ತೇಜಿಸಲು ನಾವು ಎಫ್‌ಎಸ್‌ಬಿ ಹಾಗೂ ಎಸ್‌ಎಸ್‌ಬಿಗಳನ್ನು ವಿನಂತಿಸುತ್ತೇವೆ’ ಎಂದು ‘ನವದೆಹಲಿ ಘೋಷಣೆ’ಯಲ್ಲಿ ಹೇಳಲಾಗಿದೆ.

ಮುಂದಿನ G21 ಶೃಂಗಸಭೆಗಳು :
• ಬ್ರೆಜಿಲ್‌(2024) ಮತ್ತು 2025ರಲ್ಲಿ ದಕ್ಷಿಣ ಆಫ್ರಿಕಾ ರಾಷ್ಟ್ರಗಳು ಕ್ರಮವಾಗಿ G21 ಶೃಂಗಸಭೆಯ ಅಧ್ಯಕ್ಷತೆ ವಹಿಸಲಿವೆ.
• ನೆನಪಿಡಿ : 55 ದೇಶಗಳನ್ನು ಪ್ರತಿನಿಧಿಸುವ ಸುಮಾರು 3 ಟ್ರಿಲಿಯನ್‌ ಡಾಲರ್‌ (ಅಂದಾಜು ₹ 250 ಲಕ್ಷ ಕೋಟಿ) ಆರ್ಥಿಕತೆ ಹೊಂದಿರುವ ಆಫ್ರಿಕಾ ಒಕ್ಕೂಟಕ್ಕೆ ಗುಂಪಿನಲ್ಲಿ ಕಾಯಂ ಸ್ಥಾನ ನೀಡುವಲ್ಲಿ ಯಶಸ್ವಿಯಾಗಿರುವುದು ಭಾರತ ಹೆಮ್ಮೆಪಡಬಹುದಾದ ವಿಚಾರ. ಇನ್ನು ಮುಂದೆ ಜಿ21 ಎಂದು ಕರೆಸಿಕೊಳ್ಳಲಿರುವ ಈ ಗುಂಪು ಹೆಚ್ಚು ಪ್ರಭಾವಿ, ಶಕ್ತಿಶಾಲಿ ಮತ್ತು ಶ್ರೀಮಂತ ದೇಶಗಳ ನಾಯಕತ್ವದ ಗುಂಪು ಎಂಬುದರಿಂದ ಕಡಿಮೆ ಸಂಪತ್ತು ಹೊಂದಿರುವ ದೇಶಗಳಿಗೂ ಪ್ರಾತಿನಿಧ್ಯ ಇರುವ ಗುಂಪಾಗಿ ಪರಿವರ್ತನೆಗೊಂಡಿದೆ.

ನ್ಯಾಯಮೂರ್ತಿ ರೋಹಿಣಿ ಆಯೋಗ :
• ರಚನೆ : ಅಕ್ಟೋಬರ್ 2, 2017
• ವರದಿ : ಜುಲೈ 31, 2023
• ಉದ್ದೇಶ : ಸಂವಿಧಾನದ 340ನೇ ವಿಧಿಯ ಅಡಿಯಲ್ಲಿ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಯ ಒಳವರ್ಗಿಕರಣದ ಅಧ್ಯಯನ.
• ನೆನಪಿಡಿ : ಸಂವಿಧಾನದ 15(4) ಮತ್ತು 16(4) ವಿಧಿಗಳ ಅನುಸಾರ ಕ್ರಮವಾಗಿ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳನ್ನು ದೊರಕಿಸಿಕೊಡುವುದರ ಜೊತೆಗೆ ಇನ್ನೂ ಅನೇಕ ಸಾಂವಿಧಾನಿಕ ಸೌಲಭ್ಯಗಳನ್ನು ಒಬಿಸಿ ಸಮುದಾಯಗಳಿಗೆ ನೀಡುವುದು.
• ಸುದ್ದಿಯಲ್ಲಿ : ಕೇಂದ್ರದ ಶಿಕ್ಷಣ ಸಚಿವ ಸುಭಾಷ್ ಸರ್ಕಾರ್ ಅವರು ಸಂಸತ್ತಿನಲ್ಲಿ ಇತ್ತೀಚೆಗೆ ನೀಡಿರುವ ಹೇಳಿಕೆ ಪ್ರಕಾರ ಕೇಂದ್ರ ಸರ್ಕಾರದ ಅಧೀನದ 45 ವಿಶ್ವವಿದ್ಯಾಲಯಗಳಲ್ಲಿ ಕೇವಲ 5 ಮಂದಿ ಕುಲಪತಿಗಳು, ಶೇ 4ರಷ್ಟು ಪ್ರೊಫೆಸರ್‌ಗಳು, ಶೇ 6ರಷ್ಟು ಸಹ ಪ್ರಾಧ್ಯಾಪಕರು ಒಬಿಸಿ ಸಮುದಾಯಗಳಿಗೆ ಸೇರಿದವರು. ಇದು ಪರಿಶಿಷ್ಟ ಜಾತಿಗಳ ಪ್ರಾತಿನಿಧ್ಯ ಪ್ರಮಾಣಕ್ಕಿಂತ ಕಡಿಮೆ ಎಂದು ಸಚಿವರು ಹೇಳಿದ್ದಾರೆ. ಈ ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾನ್ಯ ವರ್ಗಕ್ಕೆ ಸೇರಿದ ಪ್ರೊಫೆಸರ್‌ಗಳ ಪ್ರಮಾಣ ಶೇ 85ರಷ್ಟು, ಸಹಾಯಕ ಪ್ರಾಧ್ಯಾಪಕರ ಪ್ರಮಾಣ ಶೇ 82ರಷ್ಟು. ಉಪನ್ಯಾಸಕೇತರ ಹುದ್ದೆಗಳಲ್ಲಿ ಒಬಿಸಿ ಪ್ರಾತಿನಿಧ್ಯ ಶೇ 12ರಷ್ಟು. ಅಂದರೆ, ಒಬಿಸಿ ವರ್ಗಗಳಿಗೆ ಶೇ 27ರಷ್ಟು ಮೀಸಲಾತಿ ಎಂಬುದು ಪೂರ್ಣವಾಗಿ ಜಾರಿಯಾಗಿಲ್ಲ
• ಪೂರಕ ಮಾಹಿತಿ : ಮಂಡಲ್ ಆಯೋಗವು ಒಬಿಸಿ ಸಮುದಾಯಗಳ ಸ್ಥಿತಿ-ಗತಿಯ ಬಗ್ಗೆ ವರದಿ ನೀಡಲು ಕೇಂದ್ರ ಸರ್ಕಾರವು ಸಂವಿಧಾನದ 340ನೇ ವಿಧಿಯ ಪ್ರಕಾರ ನೇಮಿಸಿದ್ದ ರಾಷ್ಟ್ರೀಯ ಆಯೋಗ. ಈ ಆಯೋಗವು 1979ರಲ್ಲಿ ರಚನೆಯಾಗಿ, 1980ರಲ್ಲಿ ವರದಿ ನೀಡಿತು.

ಭಾರತದ ವಿದೇಶಿ ಸಾಲ: 2022–23ರ ಸ್ಥಿತಿಯ ವರದಿ’ :
• ಪ್ರಮುಖ ಅಂಶಗಳು :
> 2023ರ ಮಾರ್ಚ್‌ ಅಂತ್ಯಕ್ಕೆ ಭಾರತದ ವಿದೇಶಿ ಸಾಲವು ₹51.92 ಲಕ್ಷ ಕೋಟಿ ಆಗಿದ್ದು, ಸಾಲ ಮರುಪಾವತಿಸಲು ಲಭ್ಯವಿರುವ ನಗದು ಪ್ರಮಾಣವು ಶೇ 5.3ರಷ್ಟಾಗಿದೆ.
> ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) ಹಾಗೂ ವಿದೇಶಿ ಸಾಲದ ಅನುಪಾತವು 2021–22ರ ಮಾರ್ಚ್‌ ಅಂತ್ಯದಲ್ಲಿ ಶೇ 20ರಷ್ಟು ಇದ್ದಿದ್ದು, 2022–23ರ ಮಾರ್ಚ್ ಅಂತ್ಯಕ್ಕೆ ಶೇ 18.9ಕ್ಕೆ ಇಳಿಕೆ ಕಂಡಿದೆ.
> ಭಾರತದ ವಿದೇಶಿ ಸಾಲವು 2022ರ ಮಾರ್ಚ್ ಅಂತ್ಯಕ್ಕೆ ಹೋಲಿಸಿದರೆ 2023ರ ಮಾರ್ಚ್‌ ಅಂತ್ಯದಲ್ಲಿ ಶೇ 0.9ರಷ್ಟು ಅಲ್ಪ ಏರಿಕೆ ಕಂಡಿದೆ. ಮೌಲ್ಯದ ಲೆಕ್ಕದಲ್ಲಿ ₹46,547 ಕೋಟಿಯಷ್ಟಿದೆ.
> ವಿದೇಶಿ ವಿನಿಮಯ ಮೀಸಲಿನ ಮೊತ್ತವು ಒಟ್ಟು ವಿದೇಶಿ ಸಾಲದ ಶೇ 92.6ರಷ್ಟಕ್ಕೆ ಸರಿಹೊಂದುವಂತೆ ಇದೆ .

ಮೆಡೆಸಿನ್ಸ್ ಸಾನ್ಸ್ ಫ್ರಾಂಟಿಯರ್ಸ್ ಅಥವಾ ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ :
• ಸುದ್ದಿಯಲ್ಲಿ : ಡಾಕ್ಟರ್ಸ್‌ ವಿತ್‌ಔಟ್‌ ಬಾರ್ಡರ್ಸ್ ಅಥವಾ ಎಂಎಸ್‌ಎಫ್‌ ಸಂಘಟನೆಯು ಭೂಕಂಪನ ಪೀಡಿತ ಮೊರೊಕ್ಕೊದಲ್ಲಿ ಅಗತ್ಯ ನೆರವು ಒದಗಿಸಲು ಸಜ್ಜಾಗಿದ್ದೇವೆ ಎಂದು ಭರವಸೆ ನೀಡಿದೆ.
• ಕೇಂದ್ರ ಕಛೇರಿ: ಜಿನೀವಾ , ಸ್ವಿಟ್ಜರ್ಲ್ಯಾಂಡ್.
• ಸ್ಥಾಪನೆ : 1971
• ಕಾರ್ಯ : ಈ ಸಂಸ್ಥೆಯು ಮಧುಮೇಹ , ಔಷಧ-ನಿರೋಧಕ ಸೋಂಕುಗಳು , HIV/AIDS , ಹೆಪಟೈಟಿಸ್ C , ಉಷ್ಣವಲಯದ ಮತ್ತು ನಿರ್ಲಕ್ಷಿತ ರೋಗಗಳು, ಕ್ಷಯರೋಗ , ಲಸಿಕೆಗಳು ಮತ್ತು COVID-19 ಗೆ ಕಾಳಜಿಯನ್ನು ಒದಗಿಸುತ್ತದೆ.
• ಇದು ಮಾನವೀಯ ವೈದ್ಯಕೀಯ ಆರೈಕೆಯನ್ನು ಒದಗಿಸುವ ಚಾರಿಟಿಯಾಗಿದೆ . ಇದು ಫ್ರೆಂಚ್ ಮೂಲದ ಸರ್ಕಾರೇತರ ಸಂಸ್ಥೆ (NGO)yada ಇದು ಸಂಘರ್ಷ ಪೀಡಿತ ವಲಯ ಮತ್ತು ಸ್ಥಳೀಯ ರೋಗಗಳಿಂದ ಪ್ರಭಾವಿತವಾಗಿರುವ ದೇಶಗಳಲ್ಲಿ ವೈದ್ಯಕೀಯ ಸೇವೆಯನ್ನು ಒದಗಿಸುವುದಕ್ಕೆ ಹೆಸರುವಾಸಿಯಾಗಿದೆ .

ರಾಜ್‌ಘಾಟ್‌ನ ಲೀಡರ್ಸ್ ಲಾಂಜ್‌ನಲ್ಲಿನ ‘ಶಾಂತಿಯ ಗೋಡೆ’ಯ ಮೇಲೆ ವಿವಿಧ ದೇಶಗಳ ನಾಯಕರು ಸಹಿ
• ಅಮೆರಿಕದ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಸೇರಿದಂತೆ ಜಿ 20 ನಾಯಕರು ಭಾನುವಾರ ನವದೆಹಲಿಯ ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಅವರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು.
‌ಸ್ವಾತಂತ್ರ್ಯ ಹೋರಾಟದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದ್ದ ಹಾಗೂ 1917ರಿಂದ 1930ರವರೆಗೆ ಮಹಾತ್ಮ ಗಾಂಧಿ ಅವರಿಗೆ ಮನೆಯಾಗಿದ್ದ ಗುಜರಾತಿನ ಸಾಬರಮತಿ ಆಶ್ರಮದ ಚಿತ್ರವಿದ್ದ ವೇದಿಕೆಯಲ್ಲಿ ಗಣ್ಯರಿಗೆ ಅಂಗವಸ್ತ್ರ (ಸ್ಟಾಲ್) ತೊಡಿಸಿ ಮೋದಿ ಸ್ವಾಗತಿಸಿದರು. ಬಳಿಕ ಆಶ್ರಮದ ಮಹತ್ವವನ್ನು ವಿಶ್ವದ ನಾಯಕರಿಗೆ ವಿವರಿಸಿದರು.
ರಾಜ್‌ಘಾಟ್‌ನ ಲೀಡರ್ಸ್ ಲಾಂಜ್‌ನಲ್ಲಿನ ‘ಶಾಂತಿಯ ಗೋಡೆ’ಯ ಮೇಲೆ ವಿವಿಧ ದೇಶಗಳ ನಾಯಕರು ಸಹಿ ಮಾಡುತ್ತಿರುವ ವಿಡಿಯೊವನ್ನೂ ಮೋದಿ ಹಂಚಿಕೊಂಡಿದ್ದು, ‘ಗಾಂಧಿ ಅವರ ಆದರ್ಶಗಳು ಜಾಗತಿಕವಾಗಿ ಪ್ರತಿಧ್ವನಿಸುತ್ತವೆ’ ಎಂದು ಹೇಳಿದ್ದಾರೆ.

ಕೊಕೊಗೆ ಅಮೆರಿಕ ಓಪನ್ ಪ್ರಶಸ್ತಿ 2023 :
• ಕೊಕೊ ಗಾಫ್‌ ಅವರು ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕಿರೀಟ ಮುಡಿಗೇರಿಸಿಕೊಂಡರು.
• ಫೈನಲ್‌ನಲ್ಲಿ ಅಮೆರಿಕದ 19 ವರ್ಷದ ಗಾಫ್‌ 2–6, 6–3, 6–2 ರಿಂದ ಬೆಲರೂಸ್‌ನ ಅರಿನಾ ಸಬಲೆಂಕಾ ಅವರನ್ನು ಮಣಿಸಿದರು. 6ನೇ ಶ್ರೇಯಾಂಕ ಹೊಂದಿದ್ದ ಫ್ಲಾರಿಡಾದ ಆಟಗಾರ್ತಿಗೆ ಲಭಿಸಿದ ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಇದು.
• ಗಾಫ್‌ ಅವರು ಟ್ರೇನಿ ಆಸ್ಟಿನ್‌ ಮತ್ತು ಸೆರೆನಾ ವಿಲಿಯಮ್ಸ್‌ ಬಳಿಕ ಇಲ್ಲಿ ಚಾಂಪಿಯನ್‌ ಆದ ಆತಿಥೇಯ ದೇಶದ ಮೂರನೇ ಹದಿಹರೆಯದ ಆಟಗಾರ್ತಿ ಎನಿಸಿಕೊಂಡರು.
• ಅಮೆರಿಕ ಓಪನ್‌ ಟೂರ್ನಿ ಜಯಿಸಿದ ಕೊಕೊ ಗಾಫ್‌ ಅವರು ಮಿರುಗುವ ಟ್ರೋಫಿಯೊಂದಿಗೆ ₹ 24.93 ಕೋಟಿ ನಗದು ಬಹುಮಾನ ತಮ್ಮದಾಗಿಸಿಕೊಂಡರು. ‘ರನ್ನರ್‌ ಅಪ್‌’ ಸಬಲೆಂಕಾ ಅವರಿಗೆ ₹ 12.46 ಕೋಟಿ ಲಭಿಸಿತು.

ಇಂಡೊನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ -2023 :
• ಚಾಂಪಿಯನ್ : ಕಿರಣ್‌ ಜಾರ್ಜ್‌,ಭಾರತದ ಉದಯೋನ್ಮುಖ ಆಟಗಾರ .
• ರನ್ನರ್ ಅಪ್ : ಜಪಾನ್‌ನ ಕೂ ತಕಹಶಿ
• ಕಿರಣ್‌ ಜಾರ್ಜ್‌ :
ಕೇರಳದ ಕೊಚ್ಚಿಯ ಕಿರಣ್‌, ಕಳೆದ ವರ್ಷ ಒಡಿಶಾ ಓಪನ್‌ ಗೆದ್ದು ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿದ್ದರು.ಬೆಂಗಳೂರಿನ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ (ಪಿಪಿಬಿಎ) ತರಬೇತಿ ಪಡೆಯುತ್ತಿರುವ ಕಿರಣ್‌, ವೃತ್ತಿಜೀವನದಲ್ಲಿ ಪಡೆದ ಎರಡನೇ ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಸೂಪರ್‌ 100 ಪ್ರಶಸ್ತಿ ಇದಾಗಿದೆ.

2023ರ ವಿಶ್ವಕಪ್‌ ಬ್ಯಾಸ್ಕೆಟ್‌ಬಾಲ್‌ :
• ಚಾಂಪಿಯನ್ ತಂಡ : ಜರ್ಮನಿ
• ರನ್ನರ್ ಆಫ್ : ಸರ್ಬಿಯಾ
• ಪ್ರಮುಖ ಅಂಶಗಳು : ಫೈನಲ್‌ನಲ್ಲಿ ಸರ್ಬಿಯಾ ತಂಡವನ್ನು 83–77 ಪಾಯಿಂಟ್ಸ್‌ಗಳಿಂದ ಮಣಿಸಿದ ಜರ್ಮನಿ ತಂಡ, ಇದೇ ಮೊದಲ ಬಾರಿ ವಿಶ್ವಕಪ್‌ ಬ್ಯಾಸ್ಕೆಟ್‌ಬಾಲ್‌ ಕಿರೀಟ ಮುಡಿಗೇರಿಸಿಕೊಂಡಿತು. ಈ ಪಂದ್ಯದಲ್ಲಿ ಡೆನಿಸ್ ಶ್ರೋಡೆರ್ (28 ಪಾಯಿಂಟ್ಸ್) ಮತ್ತು ಫ್ರಾನ್ಸ್ ವ್ಯಾಗ್ನೆರ್ (19) ಅವರು ಜರ್ಮನಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
• ಕೆನಡಾಕ್ಕೆ ಕಂಚು: ಮೂರನೇ ಸ್ಥಾನಕ್ಕಾಗಿ ಪಡೆದ ಪಂದ್ಯದಲ್ಲಿ 127–118 ರಿಂದ ಅಮೆರಿಕ ತಂಡವನ್ನು ಮಣಿಸಿದ ಕೆನಡಾ ಕಂಚಿನ ಪದಕ ಗೆದ್ದುಕೊಂಡಿತು.