11 September Current Affairs
Current Affairs with Multiple Choice Quiz Questions (MCQs) on Daily Current events for preparation of PC, SDA, FDA, Group C, PDO, and State PSC Examinations.
Current affair Quiz
ಪ್ರಚಲಿತ ಘಟನೆಗಳು | Important Facts
✓ ಜಿ–20 18ನೇ ಶೃಂಗಸಭೆ- ನವದೆಹಲಿ ಘೋಷಣೆ :
• ಜಿ–20 18ನೇ ಶೃಂಗಸಭೆ: ನವದೆಹಲಿ ಘೋಷಣೆಯ ಮೂಲಕ ಈ ಕೆಳಗಿನ ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಣಕ್ಕೆ ಒತ್ತು ನೀಡಲಾಗಿದೆ. ಅವುಗಳೆಂದರೆ ,
1. ಬಲವಾದ, ಸಮರ್ಥನೀಯ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆ.
2. ಎಸ್ಡಿಜಿಗಳಲ್ಲಿ ಪ್ರಗತಿಯನ್ನು ವೇಗಗೊಳಿಸುವುದು
3. ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಅಭಿವೃದ್ಧಿ ಒಪ್ಪಂದ
4. ಉಕ್ರೇನ್ ವಿರುದ್ಧ ವಿಶೇಷ ಸೇನಾ ಕಾರ್ಯಾಚರಣೆ ನಡೆಸಿದ ರಷ್ಯಾವನ್ನು ಖಂಡಿಸುವುದರಿಂದ ದೂರ ಉಳಿಯಲು ಸದಸ್ಯ ರಾಷ್ಟ್ರಗಳ ನಾಯಕರು ತೀರ್ಮಾನ.
✓ ಆಫ್ರಿಕಾ ಒಕ್ಕೂಟಕ್ಕೆ ಸದಸ್ಯತ್ವ :
• ಜಿ–20 ಶೃಂಗಸಭೆಯಲ್ಲಿ ಆಫ್ರಿಕಾ ಒಕ್ಕೂಟಕ್ಕೆ ಕಾಯಂ ಸದಸ್ಯತ್ವ ನೀಡುವ ಪ್ರಸ್ತಾಪವನ್ನು ಅಂಗೀಕರಿಸಲಾಯಿತು. ಒಕ್ಕೂಟವು ಜಿ–20ಯ 21ನೇ ಸದಸ್ಯ ಆಗಲಿದೆ.
• ಐರೋಪ್ಯ ಒಕ್ಕೂಟಕ್ಕೆ ಸಮಾನವಾಗಿ ಆಫ್ರಿಕಾ ಒಕ್ಕೂಟ ಕಾಯಂ ಸದಸ್ಯತ್ವ ಪಡೆದಿದೆ. ಆಫ್ರಿಕಾ ಒಕ್ಕೂಟವನ್ನು ಸ್ವಾಗತಿಸಿದ ಮೋದಿ ಅವರು, ‘ಈ ಮೂಲಕ ಜಿ 20 ಹಾಗೂ ಜಾಗತಿಕ ಮಟ್ಟದಲ್ಲಿ ದಕ್ಷಿಣದ ಧ್ವನಿಯನ್ನು ಮತ್ತಷ್ಟು ಬಲಗೊಳಿಸಲಿದೆ’ ಎಂದರು.
✓ ಅಂತರರಾಷ್ಟ್ರೀಯ ಜೈವಿಕ ಇಂಧನ ಕೂಟ :
• ಪ್ರಸ್ತಾವನೆ : G20ಯ 18ನೇ ಶೃಂಗಸಭೆ.
• ಮೂಲ ರಚನೆ : ಅಂತರರಾಷ್ಟ್ರೀಯ ಜೈವಿಕ ಇಂಧನ ಕೂಟ’ ರಚನೆಯು ಭಾರತ, ಅಮೆರಿಕ ಹಾಗೂ ಬ್ರೆಜಿಲ್ನ ಆಲೋಚನೆಯಾ ಗಿದ್ದು, ಅಧಿಕ ಪ್ರಮಾಣದ ಜೈವಿಕ ಇಂಧನ ಉತ್ಪಾದನೆ ಹಾಗೂ ಈ ಮೂರು ದೇಶಗಳು ಮುಂಚೂಣಿಯಲ್ಲಿವೆ.
• ಗುರಿ: ಟ್ರೋಲ್ನಲ್ಲಿ ಶೇ 20ರಷ್ಟು ಎಥೆನಾಲ್ ಮಿಶ್ರಣ ಮಾಡುವ ಈ ಉಪಕ್ರಮವನ್ನು ಜಾಗತಿಕ ಮಟ್ಟದಲ್ಲಿ ಆರಂಭಿಸುವ ಗುರಿ ಹೊಂದಲಾಗಿದೆ .
• ಉದ್ದೇಶಗಳು :
> ಸುಸ್ಥಿರ ಜೈವಿಕ ಇಂಧನಗಳ ಬಳಕೆ ಹೆಚ್ಚಳ, ಸಹಕಾರ ವೃದ್ಧಿಗೆ ನೆರವು.
> ಜೈವಿಕ ಇಂಧನಗಳ ಜಾಗತಿಕ ಮಾರಾಟಕ್ಕೆ ಒತ್ತು, ಮಾರುಕಟ್ಟೆ ಬಲಪಡಿಸುವುದು.
> ಜೈವಿಕ ಇಂಧನಗಳಿಗೆ ಸಂಬಂಧಿಸಿ ಸಮರ್ಪಕ ನೀತಿ ರೂಪಿಸುವುದು. ರಾಷ್ಟ್ರಗಳು ತಮ್ಮದೇ ಆದ ಕಾರ್ಯಕ್ರಮ ಹೊಂದುವುದಕ್ಕೆ ಉತ್ತೇಜನ.

✓ ಮಿಲೆಟ್ ಕ್ವೀನ್’ ಲಹರಿ ಬಾಯಿ :
• ಸುದ್ದಿಯಲ್ಲಿ : G20 ಶೃಂಗಸಭೆಯಲ್ಲಿ ಮಿಲೆಟ್ ಕ್ವೀನ ಖ್ಯಾತಿಯ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಬುಡಕಟ್ಟು ರೈತ ಮಹಿಳೆ ಲಹರಿ ಬಾಯಿ ಅವರನ್ನು ವಿದೇಶಿ ನಾಯಕರ ಪತ್ನಿಯರು ಭೇಟಿ ಮಾಡಿದರು. 150ಕ್ಕೂ ಹೆಚ್ಚು ಸ್ಥಳೀಯ ಬೀಜಗಳನ್ನು ಸಂಗ್ರಹಿಸಿರುವುದು ಲಹರಿ ಅವರ ಹೆಗ್ಗಳಿಕೆ. ಈ ಪೈಕಿ 50ಕ್ಕೂ ಹೆಚ್ಚು ಸಿರಿಧಾನ್ಯಗಳು ಅವರ ಸಂಗ್ರಹದಲ್ಲಿವೆ.
✓ ಗಣ್ಯರ ಸ್ವಾಗತಕ್ಕೆ ಕೊನಾರ್ಕ್ ‘ಚಕ್ರ’ ಸಾಕ್ಷಿ :
ಭಾರತ ಮಂಟಪ’ದಲ್ಲಿ ಸ್ಥಾಪಿಸಲಾಗಿರುವ, ಕೊನಾರ್ಕ್ ಸೂರ್ಯ ದೇವಾಲಯದಲ್ಲಿನ ‘ಚಕ್ರ’ದ ಪ್ರತಿಕೃತಿ ಶನಿವಾರ ಆರಂಭಗೊಂಡ ಜಿ20 ಶೃಂಗಸಭೆಯ ಪ್ರಮುಖ ಆಕರ್ಷಣೆಯಾಗಿತ್ತು.
ಈ ಚಕ್ರದ ಪ್ರತಿಕೃತಿ ಮುಂದೆ ನಿಂತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಸಭೆಗೆ ಆಗಮಿಸುತ್ತಿದ್ದ ವಿದೇಶಿ ಗಣ್ಯರನ್ನು ಅಲ್ಲಿಯೇ ಸ್ವಾಗತಿಸುತ್ತಿದ್ದದು ಗಮನಾರ್ಹವಾಗಿತ್ತು.
ಈ ‘ಚಕ್ರ’ದ ಒಂದು ಬದಿಗೆ ಜಿ20ರ ಲಾಂಛನ, ಮತ್ತೊಂದು ಬದಿಗೆ ಧ್ಯೇಯವಾಕ್ಯ ‘ವಸುಧೈವ ಕುಟುಂಬಕಂ’– ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಅಳವಡಿಸಲಾಗಿದೆ.
13ನೇ ಶತಮಾನದಲ್ಲಿ ಆಳಿದ್ದ ರಾಜ ನರಸಿಂಹದೇವ–1, ಕೊನಾರ್ಕ್ ಸೂರ್ಯ ದೇವಾಲಯದಲ್ಲಿ ಈ ಚಕ್ರವನ್ನು ನಿರ್ಮಿಸಿದ್ದ. ಭಾರತದ ಪ್ರಾಚೀನ ಜ್ಞಾನ, ನಾಗರಿಕತೆಯ ವೈಭವ ಹಾಗೂ ವಾಸ್ತುಶಿಲ್ಪದ ಉತ್ಕೃಷ್ಟತೆಯನ್ನು ಈ ಚಕ್ರ ಸಾರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಚಲನಶೀಲತೆಯನ್ನು ಕೂಡ ಈ ಚಕ್ರ ಪ್ರತಿನಿಧಿಸುತ್ತದೆ.
✓ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ :
• ಇದು 1989ರಲ್ಲಿ ಮನಿ ಲಾಂಡರಿಂಗ್ ಅನ್ನು ಎದುರಿಸಲು ನೀತಿಗಳನ್ನು ಅಭಿವೃದ್ಧಿಪಡಿಸಲು G7 ನ ಉಪಕ್ರಮದ ಮೇಲೆ ಸ್ಥಾಪಿಸಲಾದ ಒಂದು ಅಂತರ್ ಸರ್ಕಾರಿ ಸಂಸ್ಥೆಯಾಗಿದೆ.ಇದು ಪ್ಯಾರಿಸ್ ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ.
• ಸುದ್ದಿಯಲ್ಲಿ : G20 ಶೃಂಗ ಸಭೆಯಲ್ಲಿ ಉಗ್ರರಿಗೆ ಹಣ ವರ್ಗಾವಣೆಯಾಗುವುದರ ಮೇಲೆ ಕಣ್ಗಾವಲಿರಿಸುವ ಅಂತರರಾಷ್ಟ್ರೀಯ ಸಂಸ್ಥೆ ‘ಹಣಕಾಸು ಕಾರ್ಯಪಡೆ’ಗೆ (ಎಫ್ಎಟಿಎಫ್) ಅಗತ್ಯವಿರುವ ಸಂಪನ್ಮೂಲವನ್ನು ಹೆಚ್ಚಿಸುವುದಕ್ಕೆ ಜಿ20 ಸದಸ್ಯ ರಾಷ್ಟ್ರಗಳಿಂದ ಶಪಥ ಕೈಗೊಳ್ಳಲಾಯಿತು.
• ಉಗ್ರರಿಗೆ ಹಣದ ಹರಿವು, ಹಣ ಅಕ್ರಮ ವರ್ಗಾವಣೆ ಮಟ್ಟಹಾಕಲು ಸಂದರ್ಭದಲ್ಲಿ ಎದುರಾಗುವ ಅಪಾಯಗಳ ನಿವಾರಣೆಗಾಗಿ ಎಫ್ಎಟಿಎಫ್ ಮಾದರಿಯಂತೆ ಪರಿಣಾಮಕಾರಿ ಕ್ರಮಗಳ ಅನುಷ್ಠಾನ ಮುಖ್ಯ’ ಎಂಬುದನ್ನು ಘೋಷಣೆಯಲ್ಲಿ ಹೇಳಲಾಗಿದೆ.

✓ ಗ್ರೀಸ್ ನಲ್ಲಿ ಪ್ರವಾಹ :
• ಕಾರಣ : ಡೇನಿಯಲ್’ ಚಂಡಮಾರುತವು ಮಧ್ಯ ಕರಾವಳಿ ಪ್ರದೇಶವಾದ ಮೆಗ್ನೀಷಿಯಾ, ಕಾರ್ಡಿಟ್ಸಾ, ತ್ರಿಕಾಲ ಸೇರಿದಂತೆ ಇನ್ನಿತರೆ ಪಟ್ಟಣಗಳಿಗೆ ಅಪ್ಪಳಿಸಿದೆ.
• ಪಿನಿಯೋಸ್ ನದಿ ತುಂಬಿ ಹರಿಯುತ್ತಿದ್ದು, ಗ್ರೀಸ್ನಲ್ಲಿ ಪ್ರವಾಹದಿಂದಾಗಿ ಹತ್ತು ಜನರು ಮೃತಪಟ್ಟಿದ್ದಾರೆ.
• ಕಾರ್ಡಿಟ್ಸಾ, ಪಲಮಾಸ್, ತ್ರಿಕಾಲ,ಲಾರಿಸಾ ನಗರಗಳು ಸೇರಿದಂತೆ ಹಲವು ನಗರಗಳು ಪ್ರವಾಹಕ್ಕೆ ತುತ್ತಾಗಿವೆ.
• ದೇಶದ ಎರಡನೇ ಅತಿ ದೊಡ್ಡ ನಗರವಾದ ಥೆಸಲೋನಿಕಿ ಹಾಗೂ ರಾಜಧಾನಿ ಅಥೆನ್ಸ್ ಸಂಪರ್ಕಿಸುವ ಹೆದ್ದಾರಿಯ ಹಲವೆಡೆ ಸಂಪರ್ಕ ಕಡಿತಗೊಂಡಿದೆ.
✓ ಕೌತೌಬಿಯಾ ಮಸೀದಿ :
• ಪ್ರಬಲ ಭೂಕಂಪನದಿಂದಾಗಿ ಮೊರೊಕ್ಕೊ ಅಕ್ಷರಶಃ ನಲುಗಿದೆ. ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ.
• ಶುಕ್ರವಾರ ರಾತ್ರಿ 11.11ಕ್ಕೆ ಭೂಕಂಪ ಸಂಭವಿಸಿದೆ. ಭೂಕಂಪನ ಕೇಂದ್ರ ಬಿಂದು ಭೂಮಿಯ ಮೇಲ್ಮೈನಿಂದ 18 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆ ಹೇಳಿದರೆ, 11 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ .
• 12ನೇ ಶತಮಾನದಲ್ಲಿ ನಿರ್ಮಿಸಲಾದ ಜನಪ್ರಿಯ ಕೌತೌಬಿಯಾ ಮಸೀದಿ ಹಾನಿಗೊಳಗಾಗಿದೆ.
• ನೆನಪಿಡಿ : ಹಿಂದಿನ ಭೂಕಂಪಗಳು
•1960ರಲ್ಲಿ ಮೊರೊಕ್ಕೊದ ಅಗದೀರ್ ನಗರದಲ್ಲಿ ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆಗ ಸಾವಿರಾರು ಜನರು ಮೃತ ಪಟ್ಟಿದ್ದರು. ಘಟನೆ ಬಳಿಕ ಕಟ್ಟಡ ನಿರ್ಮಾಣದ ನಿಯಮಗಳಲ್ಲಿ ಬದಲಾವಣೆ ತರಲಾಗಿತ್ತು.
• 2004ರಲ್ಲಿ ಮೆಡಿಟರೇನಿಯನ್ ಸಮುದ್ರ ತೀರದಲ್ಲಿರುವ ಅಲ್ ಹೊಸೈಮಾ ನಗರ ದಲ್ಲಿ ಭೂಕಂಪ ಸಂಭವಿಸಿ, 600ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು.
✓ ಸುಲವೇಸಿ ದ್ವೀಪ :
• ಸುದ್ದಿಯಲ್ಲಿ : ಇಂಡೊನೇಷ್ಯಾದ ಸುಲವೇಸಿ ದ್ವೀಪದ ಬಳಿ ಶನಿವಾರ ರಿಕ್ಟರ್ ಮಾಪಕದಲ್ಲಿ 6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
• ಸ್ಥಳೀಯ ಕಾಲಮಾನ ರಾತ್ರಿ 9:43ಕ್ಕೆ ಭೂಕಂಪ ಸಂಭವಿಸಿದೆ. ಕಂಪನದ ಕೇಂದ್ರಬಿಂದು 9.9 ಕಿಲೋ ಮೀಟರ್ ಆಳದಲ್ಲಿ ಇತ್ತು. ತಕ್ಷಣಕ್ಕೆ ಸುನಾಮಿಯ ಎಚ್ಚರಿಕೆ ನೀಡಿಲ್ಲ. ಆದರೆ, ಸಂಭವನೀಯ ಭೂಕಂಪನದ ಬಗ್ಗೆ ಇಂಡೊನೇಷ್ಯಾದ ಭೂ ಭೌತವಿಜ್ಞಾನ ಸಂಸ್ಥೆ (ಬಿಎಂಕೆಜಿ) ಎಚ್ಚರಿಕೆ ನೀಡಿದೆ.
✓ ಸ್ಟಾರ್ ಸ್ಟ್ರೈಕರ್ ನೇಮರ್ : ಬ್ರೆಜಿಲ್ ಪರ ಅತಿ ಹೆಚ್ಚು ಗೋಲು:
• ಸ್ಟಾರ್ ಸ್ಟ್ರೈಕರ್ ನೇಮರ್ ಅವರು ದಿಗ್ಗಜ ಆಟಗಾರ ಪೆಲೆ ಅವರನ್ನು ಹಿಂದಿಕ್ಕಿ, ಬ್ರೆಜಿಲ್ ಪರ ಅಂತರರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳಲ್ಲಿ ಅತಿಹೆಚ್ಚು ಗೋಲು ಗಳಿಸಿದ ದಾಖಲೆ ತಮ್ಮದಾಗಿಸಿಕೊಂಡರು.
• ಬೊಲಿವಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಎರಡು ಸಲ ಚೆಂಡನ್ನು ಗುರಿ ಸೇರಿಸಿದ ಅವರು ತಮ್ಮ ಒಟ್ಟು ಗೋಲುಗಳ ಸಂಖ್ಯೆಯನ್ನು 79ಕ್ಕೆ ಹೆಚ್ಚಿಸಿಕೊಂಡರು.ಇದು ಅವರ 125ನೇ ಅಂತರರಾಷ್ಟ್ರೀಯ ಪಂದ್ಯವಾಗಿತ್ತು.
• ನೆನಪಿಡಿ: ಪೆಲೆ ಅವರು ಬ್ರೆಜಿಲ್ ಪರ 77 ಗೋಲುಗಳನ್ನು ಗಳಿಸಿದ್ದರು. ಪೆಲೆ 1957– 1971ರ ಅವಧಿಯಲ್ಲಿ 92 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು. ಅವರು ಕಳೆದ ವರ್ಷ ಡಿಸೆಂಬರ್ನಲ್ಲಿ ತಮ್ಮ 82ನೇ ವಯಸ್ಸಿನಲ್ಲಿ ನಿಧನರಾಗಿದ್ದರು.