11 September Current Affairs

Current Affairs with Multiple Choice Quiz Questions (MCQs) on Daily Current events for preparation of PC, SDA, FDA, Group C, PDO, and State PSC Examinations. 

ಪ್ರಚಲಿತ ಘಟನೆಗಳು | Important Facts

✓ ಜಿ–20 18ನೇ ಶೃಂಗಸಭೆ- ನವದೆಹಲಿ ಘೋಷಣೆ :
• ಜಿ–20 18ನೇ ಶೃಂಗಸಭೆ: ನವದೆಹಲಿ ಘೋಷಣೆಯ ಮೂಲಕ ಈ ಕೆಳಗಿನ ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಣಕ್ಕೆ ಒತ್ತು ನೀಡಲಾಗಿದೆ. ಅವುಗಳೆಂದರೆ ,
1. ಬಲವಾದ, ಸಮರ್ಥನೀಯ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆ.
2. ಎಸ್‌ಡಿಜಿಗಳಲ್ಲಿ ಪ್ರಗತಿಯನ್ನು ವೇಗಗೊಳಿಸುವುದು
3. ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಅಭಿವೃದ್ಧಿ ಒಪ್ಪಂದ
4. ಉಕ್ರೇನ್‌ ವಿರುದ್ಧ ವಿಶೇಷ ಸೇನಾ ಕಾರ್ಯಾಚರಣೆ ನಡೆಸಿದ ರಷ್ಯಾವನ್ನು ಖಂಡಿಸುವುದರಿಂದ ದೂರ ಉಳಿಯಲು ಸದಸ್ಯ ರಾಷ್ಟ್ರಗಳ ನಾಯಕರು ತೀರ್ಮಾನ.

✓ ಆಫ್ರಿಕಾ ಒಕ್ಕೂಟಕ್ಕೆ ಸದಸ್ಯತ್ವ :
• ಜಿ–20 ಶೃಂಗಸಭೆಯಲ್ಲಿ ಆಫ್ರಿಕಾ ಒಕ್ಕೂಟಕ್ಕೆ ಕಾಯಂ ಸದಸ್ಯತ್ವ ನೀಡುವ ಪ್ರಸ್ತಾಪವನ್ನು ಅಂಗೀಕರಿಸಲಾಯಿತು. ಒಕ್ಕೂಟವು ಜಿ–20ಯ 21ನೇ ಸದಸ್ಯ ಆಗಲಿದೆ.
• ಐರೋಪ್ಯ ಒಕ್ಕೂಟಕ್ಕೆ ಸಮಾನವಾಗಿ ಆಫ್ರಿಕಾ ಒಕ್ಕೂಟ ಕಾಯಂ ಸದಸ್ಯತ್ವ ಪಡೆದಿದೆ. ಆಫ್ರಿಕಾ ಒಕ್ಕೂಟವನ್ನು ಸ್ವಾಗತಿಸಿದ ಮೋದಿ ಅವರು, ‘ಈ ಮೂಲಕ ಜಿ 20 ಹಾಗೂ ಜಾಗತಿಕ ಮಟ್ಟದಲ್ಲಿ ದಕ್ಷಿಣದ ಧ್ವನಿಯನ್ನು ಮತ್ತಷ್ಟು ಬಲಗೊಳಿಸಲಿದೆ’ ಎಂದರು.

✓ ಅಂತರರಾಷ್ಟ್ರೀಯ ಜೈವಿಕ ಇಂಧನ ಕೂಟ :
• ಪ್ರಸ್ತಾವನೆ : G20ಯ 18ನೇ ಶೃಂಗಸಭೆ.
• ಮೂಲ ರಚನೆ : ಅಂತರರಾಷ್ಟ್ರೀಯ ಜೈವಿಕ ಇಂಧನ ಕೂಟ’ ರಚನೆಯು ಭಾರತ, ಅಮೆರಿಕ ಹಾಗೂ ಬ್ರೆಜಿಲ್‌ನ ಆಲೋಚನೆಯಾ ಗಿದ್ದು, ಅಧಿಕ ಪ್ರಮಾಣದ ಜೈವಿಕ ಇಂಧನ ಉತ್ಪಾದನೆ ಹಾಗೂ ಈ ಮೂರು ದೇಶಗಳು ಮುಂಚೂಣಿಯಲ್ಲಿವೆ.
• ಗುರಿ: ಟ್ರೋಲ್‌ನಲ್ಲಿ ಶೇ 20ರಷ್ಟು ಎಥೆನಾಲ್‌ ಮಿಶ್ರಣ ಮಾಡುವ ಈ ಉಪಕ್ರಮವನ್ನು ಜಾಗತಿಕ ಮಟ್ಟದಲ್ಲಿ ಆರಂಭಿಸುವ ಗುರಿ ಹೊಂದಲಾಗಿದೆ .
• ಉದ್ದೇಶಗಳು :
> ಸುಸ್ಥಿರ ಜೈವಿಕ ಇಂಧನಗಳ ಬಳಕೆ ಹೆಚ್ಚಳ, ಸಹಕಾರ ವೃದ್ಧಿಗೆ ನೆರವು.
> ಜೈವಿಕ ಇಂಧನಗಳ ಜಾಗತಿಕ ಮಾರಾಟಕ್ಕೆ ಒತ್ತು, ಮಾರುಕಟ್ಟೆ ಬಲಪಡಿಸುವುದು.
> ಜೈವಿಕ ಇಂಧನಗಳಿಗೆ ಸಂಬಂಧಿಸಿ ಸಮರ್ಪಕ ನೀತಿ ರೂಪಿಸುವುದು. ರಾಷ್ಟ್ರಗಳು ತಮ್ಮದೇ ಆದ ಕಾರ್ಯಕ್ರಮ ಹೊಂದುವುದಕ್ಕೆ ಉತ್ತೇಜನ.

✓ ಮಿಲೆಟ್‌ ಕ್ವೀನ್’ ಲಹರಿ ಬಾಯಿ :
• ಸುದ್ದಿಯಲ್ಲಿ : G20 ಶೃಂಗಸಭೆಯಲ್ಲಿ ಮಿಲೆಟ್‌ ಕ್ವೀನ ಖ್ಯಾತಿಯ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಬುಡಕಟ್ಟು ರೈತ ಮಹಿಳೆ ಲಹರಿ ಬಾಯಿ ಅವರನ್ನು ವಿದೇಶಿ ನಾಯಕರ ಪತ್ನಿಯರು ಭೇಟಿ ಮಾಡಿದರು. 150ಕ್ಕೂ ಹೆಚ್ಚು ಸ್ಥಳೀಯ ಬೀಜಗಳನ್ನು ಸಂಗ್ರಹಿಸಿರುವುದು ಲಹರಿ ಅವರ ಹೆಗ್ಗಳಿಕೆ. ಈ ಪೈಕಿ 50ಕ್ಕೂ ಹೆಚ್ಚು ಸಿರಿಧಾನ್ಯಗಳು ಅವರ ಸಂಗ್ರಹದಲ್ಲಿವೆ.

✓ ಗಣ್ಯರ ಸ್ವಾಗತಕ್ಕೆ ಕೊನಾರ್ಕ್‌ ‘ಚಕ್ರ’ ಸಾಕ್ಷಿ :
ಭಾರತ ಮಂಟಪ’ದಲ್ಲಿ ಸ್ಥಾಪಿಸಲಾಗಿರುವ, ಕೊನಾರ್ಕ್‌ ಸೂರ್ಯ ದೇವಾಲಯದಲ್ಲಿನ ‘ಚಕ್ರ’ದ ಪ್ರತಿಕೃತಿ ಶನಿವಾರ ಆರಂಭಗೊಂಡ ಜಿ20 ಶೃಂಗಸಭೆಯ ಪ್ರಮುಖ ಆಕರ್ಷಣೆಯಾಗಿತ್ತು.
ಈ ಚಕ್ರದ ಪ್ರತಿಕೃತಿ ಮುಂದೆ ನಿಂತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಸಭೆಗೆ ಆಗಮಿಸುತ್ತಿದ್ದ ವಿದೇಶಿ ಗಣ್ಯರನ್ನು ಅಲ್ಲಿಯೇ ಸ್ವಾಗತಿಸುತ್ತಿದ್ದದು ಗಮನಾರ್ಹವಾಗಿತ್ತು.
ಈ ‘ಚಕ್ರ’ದ ಒಂದು ಬದಿಗೆ ಜಿ20ರ ಲಾಂಛನ, ಮತ್ತೊಂದು ಬದಿಗೆ ಧ್ಯೇಯವಾಕ್ಯ ‘ವಸುಧೈವ ಕುಟುಂಬಕಂ’– ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಅಳವಡಿಸಲಾಗಿದೆ.
13ನೇ ಶತಮಾನದಲ್ಲಿ ಆಳಿದ್ದ ರಾಜ ನರಸಿಂಹದೇವ–1, ಕೊನಾರ್ಕ್‌ ಸೂರ್ಯ ದೇವಾಲಯದಲ್ಲಿ ಈ ಚಕ್ರವನ್ನು ನಿರ್ಮಿಸಿದ್ದ. ಭಾರತದ ಪ್ರಾಚೀನ ಜ್ಞಾನ, ನಾಗರಿಕತೆಯ ವೈಭವ ಹಾಗೂ ವಾಸ್ತುಶಿಲ್ಪದ ಉತ್ಕೃಷ್ಟತೆಯನ್ನು ಈ ಚಕ್ರ ಸಾರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಚಲನಶೀಲತೆಯನ್ನು ಕೂಡ ಈ ಚಕ್ರ ಪ್ರತಿನಿಧಿಸುತ್ತದೆ.

✓ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ :
• ಇದು 1989ರಲ್ಲಿ ಮನಿ ಲಾಂಡರಿಂಗ್ ಅನ್ನು ಎದುರಿಸಲು ನೀತಿಗಳನ್ನು ಅಭಿವೃದ್ಧಿಪಡಿಸಲು G7 ನ ಉಪಕ್ರಮದ ಮೇಲೆ ಸ್ಥಾಪಿಸಲಾದ ಒಂದು ಅಂತರ್ ಸರ್ಕಾರಿ ಸಂಸ್ಥೆಯಾಗಿದೆ.ಇದು ಪ್ಯಾರಿಸ್ ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ.
• ಸುದ್ದಿಯಲ್ಲಿ : G20 ಶೃಂಗ ಸಭೆಯಲ್ಲಿ ಉಗ್ರರಿಗೆ ಹಣ ವರ್ಗಾವಣೆಯಾಗುವುದರ ಮೇಲೆ ಕಣ್ಗಾವಲಿರಿಸುವ ಅಂತರರಾಷ್ಟ್ರೀಯ ಸಂಸ್ಥೆ ‘ಹಣಕಾಸು ಕಾರ್ಯಪಡೆ’ಗೆ (ಎಫ್‌ಎಟಿಎಫ್‌) ಅಗತ್ಯವಿರುವ ಸಂಪನ್ಮೂಲವನ್ನು ಹೆಚ್ಚಿಸುವುದಕ್ಕೆ ಜಿ20 ಸದಸ್ಯ ರಾಷ್ಟ್ರಗಳಿಂದ ಶಪಥ ಕೈಗೊಳ್ಳಲಾಯಿತು.
• ಉಗ್ರರಿಗೆ ಹಣದ ಹರಿವು, ಹಣ ಅಕ್ರಮ ವರ್ಗಾವಣೆ ಮಟ್ಟಹಾಕಲು ಸಂದರ್ಭದಲ್ಲಿ ಎದುರಾಗುವ ಅಪಾಯಗಳ ನಿವಾರಣೆಗಾಗಿ ಎಫ್‌ಎಟಿಎಫ್‌ ಮಾದರಿಯಂತೆ ಪರಿಣಾಮಕಾರಿ ಕ್ರಮಗಳ ಅನುಷ್ಠಾನ ಮುಖ್ಯ’ ಎಂಬುದನ್ನು ಘೋಷಣೆಯಲ್ಲಿ ಹೇಳಲಾಗಿದೆ.

✓ ಗ್ರೀಸ್ ನಲ್ಲಿ ಪ್ರವಾಹ :
• ಕಾರಣ : ಡೇನಿಯಲ್‌’ ಚಂಡಮಾರುತವು ಮಧ್ಯ ಕರಾವಳಿ ಪ್ರದೇಶವಾದ ಮೆಗ್ನೀಷಿಯಾ, ಕಾರ್ಡಿಟ್ಸಾ, ತ್ರಿಕಾಲ ಸೇರಿದಂತೆ ಇನ್ನಿತರೆ ಪಟ್ಟಣಗಳಿಗೆ ಅಪ್ಪಳಿಸಿದೆ.
• ಪಿನಿಯೋಸ್‌ ನದಿ ತುಂಬಿ ಹರಿಯುತ್ತಿದ್ದು, ಗ್ರೀಸ್‌ನಲ್ಲಿ ಪ್ರವಾಹದಿಂದಾಗಿ ಹತ್ತು ಜನರು ಮೃತಪಟ್ಟಿದ್ದಾರೆ.
• ಕಾರ್ಡಿಟ್ಸಾ, ಪಲಮಾಸ್‌, ತ್ರಿಕಾಲ,ಲಾರಿಸಾ ನಗರಗಳು ಸೇರಿದಂತೆ ಹಲವು ನಗರಗಳು ಪ್ರವಾಹಕ್ಕೆ ತುತ್ತಾಗಿವೆ.
• ದೇಶದ ಎರಡನೇ ಅತಿ ದೊಡ್ಡ ನಗರವಾದ ಥೆಸಲೋನಿಕಿ ಹಾಗೂ ರಾಜಧಾನಿ ಅಥೆನ್ಸ್‌ ಸಂಪರ್ಕಿಸುವ ಹೆದ್ದಾರಿಯ ಹಲವೆಡೆ ಸಂಪರ್ಕ ಕಡಿತಗೊಂಡಿದೆ.

✓ ಕೌತೌಬಿಯಾ ಮಸೀದಿ :
• ಪ್ರಬಲ ಭೂಕಂಪನದಿಂದಾಗಿ ಮೊರೊಕ್ಕೊ ಅಕ್ಷರಶಃ ನಲುಗಿದೆ. ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ.
• ಶುಕ್ರವಾರ ರಾತ್ರಿ 11.11ಕ್ಕೆ ಭೂಕಂಪ ಸಂಭವಿಸಿದೆ. ಭೂಕಂಪನ ಕೇಂದ್ರ ಬಿಂದು ಭೂಮಿಯ ಮೇಲ್ಮೈನಿಂದ 18 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆ ಹೇಳಿದರೆ, 11 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ .
• 12ನೇ ಶತಮಾನದಲ್ಲಿ ನಿರ್ಮಿಸಲಾದ ಜನಪ್ರಿಯ ಕೌತೌಬಿಯಾ ಮಸೀದಿ ಹಾನಿಗೊಳಗಾಗಿದೆ.
• ನೆನಪಿಡಿ : ಹಿಂದಿನ ಭೂಕಂಪಗಳು
•1960ರಲ್ಲಿ ಮೊರೊಕ್ಕೊದ ಅಗದೀರ್‌ ನಗರದಲ್ಲಿ ರಿಕ್ಟರ್‌ ಮಾಪಕದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆಗ ಸಾವಿರಾರು ಜನರು ಮೃತ ಪಟ್ಟಿದ್ದರು. ಘಟನೆ ಬಳಿಕ ಕಟ್ಟಡ ನಿರ್ಮಾಣದ ನಿಯಮಗಳಲ್ಲಿ ಬದಲಾವಣೆ ತರಲಾಗಿತ್ತು.
• 2004ರಲ್ಲಿ ಮೆಡಿಟರೇನಿಯನ್‌ ಸಮುದ್ರ ತೀರದಲ್ಲಿರುವ ಅಲ್‌ ಹೊಸೈಮಾ ನಗರ ದಲ್ಲಿ ಭೂಕಂಪ ಸಂಭವಿಸಿ, 600ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು.

✓ ಸುಲವೇಸಿ ದ್ವೀಪ :
• ಸುದ್ದಿಯಲ್ಲಿ : ಇಂ‌ಡೊನೇಷ್ಯಾದ ಸುಲವೇಸಿ ದ್ವೀಪದ ಬಳಿ ಶನಿವಾರ ರಿಕ್ಟರ್‌ ಮಾಪಕದಲ್ಲಿ 6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
• ಸ್ಥಳೀಯ ಕಾಲಮಾನ ರಾತ್ರಿ 9:43ಕ್ಕೆ ಭೂಕಂಪ ಸಂಭವಿಸಿದೆ. ಕಂಪನದ ಕೇಂದ್ರಬಿಂದು 9.9 ಕಿಲೋ ಮೀಟರ್ ಆಳದಲ್ಲಿ ಇತ್ತು. ತಕ್ಷಣಕ್ಕೆ ಸುನಾಮಿಯ ಎಚ್ಚರಿಕೆ ನೀಡಿಲ್ಲ. ಆದರೆ, ಸಂಭವನೀಯ ಭೂಕಂಪನದ ಬಗ್ಗೆ ಇಂಡೊನೇಷ್ಯಾದ ಭೂ ಭೌತವಿಜ್ಞಾನ ಸಂಸ್ಥೆ (ಬಿಎಂಕೆಜಿ) ಎಚ್ಚರಿಕೆ ನೀಡಿದೆ.

✓ ಸ್ಟಾರ್‌ ಸ್ಟ್ರೈಕರ್‌ ನೇಮರ್‌ : ಬ್ರೆಜಿಲ್ ಪರ ಅತಿ ಹೆಚ್ಚು ಗೋಲು:
• ಸ್ಟಾರ್‌ ಸ್ಟ್ರೈಕರ್‌ ನೇಮರ್‌ ಅವರು ದಿಗ್ಗಜ ಆಟಗಾರ ಪೆಲೆ ಅವರನ್ನು ಹಿಂದಿಕ್ಕಿ, ಬ್ರೆಜಿಲ್‌ ಪರ ಅಂತರರಾಷ್ಟ್ರೀಯ ಫುಟ್‌ಬಾಲ್‌ ಪಂದ್ಯಗಳಲ್ಲಿ ಅತಿಹೆಚ್ಚು ಗೋಲು ಗಳಿಸಿದ ದಾಖಲೆ ತಮ್ಮದಾಗಿಸಿಕೊಂಡರು.
• ಬೊಲಿವಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಎರಡು ಸಲ ಚೆಂಡನ್ನು ಗುರಿ ಸೇರಿಸಿದ ಅವರು ತಮ್ಮ ಒಟ್ಟು ಗೋಲುಗಳ ಸಂಖ್ಯೆಯನ್ನು 79ಕ್ಕೆ ಹೆಚ್ಚಿಸಿಕೊಂಡರು.ಇದು ಅವರ 125ನೇ ಅಂತರರಾಷ್ಟ್ರೀಯ ‍ಪಂದ್ಯವಾಗಿತ್ತು.
• ನೆನಪಿಡಿ: ಪೆಲೆ ಅವರು ಬ್ರೆಜಿಲ್‌ ಪರ 77 ಗೋಲುಗಳನ್ನು ಗಳಿಸಿದ್ದರು. ಪೆಲೆ 1957– 1971ರ ಅವಧಿಯಲ್ಲಿ 92 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು. ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ತಮ್ಮ 82ನೇ ವಯಸ್ಸಿನಲ್ಲಿ ನಿಧನರಾಗಿದ್ದರು.